ಬೆಂಗಳೂರು: ಪೀಣ್ಯ-ಸಂಪಿಗೆರಸ್ತೆ ನಡುವೆ ಮಾರ್ಚ್* 1ರಿಂದ ಸಂಚರಿಸಲಿರುವ 'ನಮ್ಮ ಮೆಟ್ರೋ'ದಲ್ಲಿ ಯಶವಂತಪುರದ ಲಗೇಜು ಹೊಂದಿದ ರೈಲು ಪ್ರಯಾಣಿಕರು ಪ್ರಯಾಣಿಸುವಂತಿಲ್ಲ! ಹೌದು, ಯಶವಂತಪುರ ರೈಲು ಪ್ರಯಾಣಿಕರಿಗೆ ಮೆಟ್ರೋ ರೈಲು ಏರಲು 'ಮೆಟ್ರೋ ರೈಲ್ವೆ (ಕಾರ್ಯಾಚರಣೆ ಮತ್ತು ನಿರ್ವಹಣೆ) ಅಧಿನಿಯಮ'ವೇ ಅಡ್ಡಿಯಾಗಲಿದೆ.
ದೂರದ ಊರುಗಳಿಂದ ಲಗೇಜು ಸಮೇತ ಬಂದಿಳಿಯುವ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರು, ಎದುರಿನಲ್ಲೇ ಇರುವ ಮೆಟ್ರೋ ಏರಲು ಮುಂದಾದರೆ, ಮೆಟ್ರೋ ಕಾಯ್ದೆ ಪ್ರಕಾರ ಪ್ರವೇಶ ದ್ವಾರದಲ್ಲೇ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್*ಸಿ) ಸಿಬ್ಬಂದಿ ತಡೆಯಲಿದ್ದಾರೆ.
ಏಕೆಂದರೆ, ಅಧಿನಿಯಮದ ಪ್ರಕಾರ ಮೆಟ್ರೋದಲ್ಲಿ ಬೆಂಗಳೂರು ಮೆಟ್ರೋ ರೈಲ್ವೆ ಆಡಳಿತದ ಪೂರ್ವಾನುಮತಿ ಇಲ್ಲದೆ, ಯಾವುದೇ ವ್ಯಕ್ತಿಯು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವಾಗ, 60x45x25 ಸೆಂ.ಮೀ.ಗಿಂತ ಹೆಚ್ಚಿನ ಗಾತ್ರದ ಹಾಗೂ 15 ಕೆಜಿಗಿಂತ ಹೆಚ್ಚು ತೂಕದ ಸರಕುಗಳನ್ನು ಸಾಗಿಸುವಂತಿಲ್ಲ. ಆದರೆ, ಯಶವಂತಪುರಕ್ಕೆ ಬಂದಿಳಿಯುವ ಬಹುತೇಕ ಪ್ರಯಾಣಿಕರ ಕೈಯಲ್ಲಿ ನಿಗದಿಪಡಿಸಿದ 15 ಕೆಜಿಗಿಂತ ಹೆಚ್ಚು ತೂಕದ ಲಗೇಜುಗಳೇ ಇರುವುದು ಸರ್ವೇಸಾಮಾನ್ಯ. ಹಾಗಾಗಿ, ಅವರಿಗೆ ಮೆಟ್ರೋದಲ್ಲಿ ಪ್ರವೇಶ ದೊರೆಯಬೇಕಾದರೆ, ಪರವಾನಗಿ ಅತ್ಯಗತ್ಯವಾಗಿದೆ.
ವಿಚಿತ್ರವೆಂದರೆ ಪೀಣ್ಯ-ಸಂಪಿಗೆರಸ್ತೆ ಮಾರ್ಗದಲ್ಲಿ ಬಿಎಂಆರ್*ಸಿಯು ಅತಿ ಹೆಚ್ಚು ಪ್ರಯಾಣಿಕರ ನಿರೀಕ್ಷೆಯಲ್ಲಿದೆ. ಅದರಲ್ಲಿ ಬಹುತೇಕರು ಇದೇ ಯಶವಂತಪುರ ರೈಲು ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರಾಗಿದ್ದಾರೆ. ನಿತ್ಯ ಯಶವಂತಪುರ ರೈಲು ನಿಲ್ದಾಣದಲ್ಲಿ ಸುಮಾರು 60 ರೈಲುಗಳ ನಿಲುಗಡೆಯಾಗುತ್ತದೆ. ಬೆಳಗಿನ 'ಪೀಕ್* ಅವರ್*'ನಲ್ಲೇ ಹೆಚ್ಚು ರೈಲುಗಳ ನಿಲುಗಡೆಯಾಗುತ್ತದೆ. ನಿತ್ಯ ಇಲ್ಲಿಂದಲೇ 80 ಸಾವಿರದಿಂದ ಒಂದು ಲಕ್ಷ ಪ್ರಯಾಣಿಕರು ಬಂದು-ಹೋಗುತ್ತಾರೆ. ಆದರೆ, ಅವರೊಂದಿಗೆ ಬರುವ ಲಗೇಜುಗಳದ್ದೇ ಸಮಸ್ಯೆಯಾಗಿದೆ.
ಇದಕ್ಕಾಗಿ ಅಧಿನಿಯಮಕ್ಕೆ ತಿದ್ದುಪಡಿ ತರಬೇಕು ಅಥವಾ ಅಧಿನಿಯಮದ ಪಾಲನೆಯಲ್ಲಿ ರೈಲು ಪ್ರಯಾಣಿಕರಿಗೆ ವಿನಾಯ್ತಿ ನೀಡಬೇಕು. ಆದರೆ, ರೀಚ್*-1 (ಎಂ.ಜಿ. ರಸ್ತೆ- ಬೈಯಪ್ಪನಹಳ್ಳಿ)ರಲ್ಲಿ ಅಪ್ಪಿ-ತಪ್ಪಿಯೂ ನಿಯಮಗಳ ಉಲ್ಲಂಘನೆ ಅವಕಾಶ ನೀಡಿಲ್ಲ. ಹೀಗಿರುವಾಗ, ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ತನ್ನ ಆದಾಯ ಹೆಚ್ಚಿಸಿಕೊಳ್ಳಲು ನಿಯಮದ ಸಡಿಲಿಕೆಯಲ್ಲಿ ಬಿಎಂಆರ್*ಸಿ ಉದಾರತೆ ತೋರಲೇಬೇಕು ಎನ್ನುತ್ತಾರೆ ಮೆಟ್ರೋ ತಜ್ಞರು.
ಯಶವಂತಪುರಕ್ಕೆ ಪ್ರಮುಖವಾಗಿ ಹೌರಾ, ನಿಜಾಮುದ್ದೀನ್*, ಲಕೌ°, ಇಂದೋರ್*, ಜೈಪುರ, ಮುಜಾಫ*ರಪುರ, ಹಾಟಿಯಾ, ಮಿರಜ್*, ವಾಸ್ಕೋ, ಕಾರವಾರ, ಭುವನೇಶ್ವರ, ಪುರಿ, ತಾತನಗರ, ಗೋರಖ್*ಪುರ, ಬೀದರ್*, ವಿಜಾಪುರ, ಬಾಗಲಕೋಟೆ, ಪಾಂಡಿಚೇರಿ, ಹುಬ್ಬಳ್ಳಿ, ಧಾರವಾಡ, ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಮೈಸೂರು, ಕೊಲ್ಲಾಪುರ ಮತ್ತಿತರ ಕಡೆ ತೆರಳುವ ರೈಲುಗಳಿವೆ. ದೂರ ಊರಿಗೆ ಪ್ರಯಾಣ ಬೆಳೆಸುವವರು ಸಾಮಾನ್ಯವಾಗಿ ಭಾರದ ಲಗೇಜುಗಳನ್ನು ತರುವುದು ಸಹಜ. ಆದರೆ, ಮೆಟ್ರೋದಲ್ಲಿ ಇದಕ್ಕೆ ಅವಕಾಶ ನೀಡದಿದ್ದರೆ, ಈ ಸೌಕರ್ಯ ಇದ್ದು ಏನು ಪ್ರಯೋಜನ? ಎಂದು ಪ್ರಜಾ ಸಂಸ್ಥೆಯ ಸಂಜೀವ್* ದ್ಯಾಮಣ್ಣನವರ ಕೇಳುತ್ತಾರೆ.
ಸಾಮಾನ್ಯ ರೈಲುಗಳಲ್ಲಿ 30ರಿಂದ 50 ಕೆಜಿವರೆಗಿನ ಲಗೇಜು ತೆಗೆದುಕೊಂಡು ಹೋಗಲು ಅವಕಾಶ ಇರುತ್ತದೆ. ಇನ್ನು ವಿದೇಶಗಳಲ್ಲಿನ ಮೆಟ್ರೋದಲ್ಲಿ 20 ಕೆಜಿಗಿಂತ ಅಧಿಕ ಭಾರದ ಲಗೇಜುಗಳನ್ನೂ ತೆಗೆದುಕೊಂಡು ಹೋಗಬಹುದು. ಅದೇ ರೀತಿ, ಇಲ್ಲಿಯೂ ಅವಕಾಶ ಕೊಡಬೇಕು ಎಂದೂ ಅವರು ಒತ್ತಾಯಿಸುತ್ತಾರೆ.
ಒಂದು ವೇಳೆ ಅವಕಾಶ ನೀಡಿದರೂ, ಪ್ರವೇಶ ದ್ವಾರದಲ್ಲಿ ತ್ವರಿತ ತಪಾಸಣೆಗೆ ಬಿಎಂಆರ್*ಸಿ ವ್ಯವಸ್ಥೆ ಮಾಡಬೇಕು. ಯಾಕೆಂದರೆ, ರೈಲಿನಲ್ಲಿ ಬಂದಿಳಿಯುವ ಜನ ಧಾವಂತದಲ್ಲಿರುತ್ತಾರೆ. ಅದರಲ್ಲೂ ಏಕಾಏಕಿ ಬಂದಿಳಿದರೆ, ನೂರಾರು ಜನರ ತಪಾಸಣೆಯಲ್ಲೇ ಸಮಯ ವ್ಯರ್ಥವಾದರೆ, ಪ್ರಯಾಣಿಕರಿಗೆ ಕಿರಿಕಿರಿಯಾದಂತಾಗುತ್ತದೆ ಎಂದು ಎಲೆಕ್ಟ್ರಾನಿಕ್* ಎಂಜಿನಿಯರ್* ಇಂಡ್ಲು ನಿವಾಸಿ ಹೇಮಂತ್* ಅಭಿಪ್ರಾಯಪಡುತ್ತಾರೆ.
ತುಸು ವಿನಾಯಿತಿ ಕೊಡ್ತೀವಿ
'ಅಧಿನಿಯಮದ ಪ್ರಕಾರ ಭಾರಿ ಲಗೇಜುಗಳಿಗೆ ಮೆಟ್ರೋದಲ್ಲಿ ಅವಕಾಶ ಇರುವುದಿಲ್ಲ. ಆದರೆ, ಯಶವಂತಪುರ ನಿಲ್ದಾಣದಲ್ಲಿ ಈ ವಿಚಾರದಲ್ಲಿ ನಿಯಮದಲ್ಲಿ ತುಸು ವಿನಾಯ್ತಿ ನೀಡಬೇಕಾಗುತ್ತದೆ. ಬಿಎಂಆರ್*ಸಿ ಈ ಸಂಬಂಧ ವಿನಾಯ್ತಿ ನೀಡಲಿದೆ. ನಿಯಮ ಮತ್ತು ತಪಾಸಣೆಯಿಂದ ಪ್ರಯಾಣಿಕರಿಗೆ ತುಂಬಾ ಸಮಸ್ಯೆಯೇನೂ ಆಗದು. 'ಪೀಕ್* ಅವರ್*'ನಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಕಿರಿಕಿರಿಯಾಗಬಹುದು. ಪ್ರಯಾಣಿಕರ ಒತ್ತಡವನ್ನು ನೋಡಿಕೊಂಡು ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು'- ಪ್ರದೀಪ್*ಸಿಂಗ್* ಖರೋಲ, ವ್ಯವಸ್ಥಾಪಕ ನಿರ್ದೇಶಕರು, ಬಿಎಂಆರ್*ಸಿ.
* ಯಶವಂತಪುರ ನಿಲ್ದಾಣದಲ್ಲಿ ಬೆಳಿಗ್ಗೆ 4ರಿಂದ ಮಧ್ಯರಾತ್ರಿ 12ರವರೆಗೆ 60 ರೈಲುಗಳು ನಿಲುಗಡೆ
* ಒಂದು ಲಕ್ಷ ಪ್ರಯಾಣಿಕರು ಬಂದು-ಹೋಗುತ್ತಾರೆ
* ಮೆಟ್ರೋ ಪ್ರಯಾಣಿಕರ ನಿರೀಕ್ಷೆ ಇರುವುದು ನಿತ್ಯ ಒಂದು ಲಕ್ಷ
* ಬಹುತೇಕ ಪ್ರಯಾಣಿಕರ ನಿರೀಕ್ಷೆ ಯಶವಂತಪುರ ಮತ್ತು ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ
ಪಾದಚಾರಿ ಮೇಲ್ಸೇತುವೆ ಶೀಘ್ರ
ಯಶವಂತಪುರ ರೈಲು ನಿಲ್ದಾಣದಿಂದ ಯಶವಂಪುತರ ಮೆಟ್ರೋ ನಿಲ್ದಾಣದವರೆಗೆ ಪಾದಚಾರಿ ಮೇಲ್ಸೇತುವೆ ನಿರ್ಮಿಸಲು ಬಿಎಂಆರ್*ಸಿ ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಸಿದ್ಧತೆ ಕೂಡ ನಡೆದಿದೆ. ಶೀಘ್ರದಲ್ಲೇ ನಿರ್ಮಿಸಲಾಗುವುದು ಎಂದು ಪ್ರದೀಪ್*ಸಿಂಗ್* ಖರೋಲ 'ಉದಯವಾಣಿ'ಗೆ ಸ್ಪಷ್ಟಪಡಿಸಿದ್ದಾರೆ.
ಅದೇ ರೀತಿ, ಯಶವಂತಪುರ ಟಿಟಿಎಂಸಿಯಿಂದ ಸಾಬೂನು ಕಾರ್ಖಾನೆಯ ಬಳಿ ಇರುವ ಮೆಟ್ರೋ ನಿಲ್ದಾಣದ ನಡುವೆ ಪಾದಚಾರ ಮೇಲ್ಸೇತುವೆ ಮಾಡುವುದರಿಂದ ಪ್ರಯಾಣಿಕರಿಗೆ ಅನುಕೂಲವಾಬಹುದು. ಆದರೆ, ಈ ಬಗ್ಗೆ ಯಾವುದೇ ಪ್ರಸ್ತಾವ ಇಲ್ಲ. ಪ್ರಸ್ತಾವನೆ ಬಂದರೆ ಪರಿಶೀಲಿಸಲಾಗುವುದು ಎಂದು ಬಿಎಂಆರ್*ಸಿ ನಿರ್ದೇಶಕ ಡಿ.ಡಿ. ಪಹುಜಾ ತಿಳಿಸಿದ್ದಾರೆ.
ಸಿಆರ್*ಎಂ ಅನುಮತಿ ಬೇಕು
15 ಕೆಜಿಗಿಂತ ಹೆಚ್ಚು ತೂಕದ ಲಗೇಜುಗಳನ್ನು ಮೆಟ್ರೋದಲ್ಲಿ ಕೊಂಡೊಯ್ಯಲು ಗ್ರಾಹಕ ವ್ಯವಹಾರಗಳ ವ್ಯವಸ್ಥಾಪಕ (ಸಿಆರ್*ಎಂ) ಅವರಿಂದ ಪರವಾನಗಿ ಪಡೆಯಬೇಕು. ಇವರು ಆಯಾ ಮೆಟ್ರೋ ನಿಲ್ದಾಣಗಳಲ್ಲಿ ಇರುತ್ತಾರೆ. ಭಾರದ ಲಗೇಜುಗಳ ಅಗತ್ಯತೆಯನ್ನು ಮನಗಂಡು ಅನುಮತಿ ನೀಡುತ್ತಾರೆ.

No comments:
Post a Comment